ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೆ. ವಿ. ಕುಮಾರನ್ ರಿಗೆ ಕನ್ನಡ ಭವನ ಅಭಿನಂದನೆ…

ಕಾಸರಗೋಡು : ಎಸ್ .ಎಲ್. ಭೈರಪ್ಪ ಅವರ “ಯಾನ “ಕಾದಂಬರಿಯನ್ನು ಕನ್ನಡ ದಿಂದ ಮಲಯಾಳದಲ್ಲಿ ಅನುವಾದ ಮಾಡಿದ ಯಾನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕೆ. ವಿ. ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನದ ವತಿಯಿಂದ ಗೌರವ ಅಭಿನಂದನೆ ನೀಡಿ ಗೌರವಿಸಲಾಯಿತು.
ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ದಲ್ಲಿ ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಡೆದ ಮಲಯಾಳಂ -ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾ ರಾಣಿ ಟೀಚರ್ ನೇತೃತ್ವ ವಹಿಸಿದರು.
ಗೌರವ ಅಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷ ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ ಶಾಲು ಹೊದಿಸಿ, ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿ ಗೌರವಿಸಿದರು. ಮಲಯಾಳಂ ಸಾಹಿತಿ ರವೀಂದ್ರನ್ ಪಾಡಿ ಅಭಿನಂದನಾ ಭಾಷಣ ಮಾಡಿದರು. ಡಿ. ಬಿ.ಟಿ. ಎ. ಅಧ್ಯಕ್ಷೆ ಡಾ ಸುಷ್ಮಾ ಶಂಕರ್ ಬೆಂಗಳೂರು, ಕನ್ನೂರು ವಿ ವಿ ಸೆನೆಟ್ ಸದಸ್ಯ ಡಾ.ಪ್ರೊ. ರತ್ನಾಕರ ಮಲ್ಲಮೂಲೆ, ಕುಪ್ಪಮ್ ಯೂನಿವರ್ಸಿಟಿ ಪ್ರೊ.ಹಿರಣ್ಯ ಶಿವಕುಮಾರ್, ಡಿ. ಬಿ.ಟಿ. ಎ. ಪ್ರಧಾನ ಕಾರ್ಯದರ್ಶಿ ಡಾ. ರೋಷನ್, ಕೆ.ವಿ. ಕುಮಾರನ್ ಇವರಿಗೆ 2024ರಲ್ಲಿ ಸಮಗ್ರ ಸಾಹಿತ್ಯ ವಿಭಾಗದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಡಾ. ಕೋಟ ಶಿವರಾಮ ಕಾರಂತರ “ಚೋಮನ ದುಡಿ “ಮಲಯಾಳಕ್ಕೆ ಅನುವಾದ ಮಾಡಿದ ಮಲಯಾಳಂ ಕೃತಿ ಮೂರು ಲಕ್ಷಕ್ಕೂ ಅಧಿಕ ಕೃತಿಗಳು ಚಲಾವಣೆಯಾಗಿತ್ತು.

Sponsors

Related Articles

Back to top button