ಬೆಲ್ಲ ಸವಿಯ ಹಂಚಲಿ…

ಬೆಲ್ಲ ಸವಿಯ ಹಂಚಲಿ…
ಒಂದು ಚಣವು ನಿಲ್ಲದಂತೆ
ಕಾಲದೊಡನೆ ಚಲಿಸುವ
ದಿನಪ ನಮಗೆ ದಿನವು ಸ್ಪೂರ್ತಿ
ಕರ್ಮಯೋಗಿಯಾಗುತ
ಯುಗದ ಆದಿ ಅಂತ್ಯವನ್ನು
ಕಂಡ ಸಾಕ್ಷಿಯಲ್ಲವೇ
ಜೀವ ಜೀವದಲ್ಲಿ ಬೆಳಕು
ಹರಿಸೋ ನಿತ್ಯ ಸತ್ವವೇ
ಹಸಿರಿನಲ್ಲಿ ಉಸಿರು ಬೆರೆಸಿ
ಜೀವ ಜಾಲ ಪೊರೆಯುವೆ
ಬಾನಿನಲ್ಲಿ ಮೋಡವಾಗಿ
ಇಳೆಯ ತಂಪುಗೊಳಿಸುವೆ
ನಿನ್ನ ಬೆಳಕು ಮನದ ಕಹಿಯ
ಕ್ರೋಧ – ಮೋಹಕರಗಿಸಿ
ಸವಿಜೇನ ಮಾತಿನಿಂದ
ಬೆಲ್ಲ ಸವಿಯ ಹಂಚಲಿ
ರ:ಡಾ. ವೀಣಾ ಎನ್ ಸುಳ್ಯ
Sponsors