ಪಾಕಿಸ್ತಾನದ ಭಯೋತ್ಪಾದಕ ನೆಲೆ ಮೇಲೆ ದಾಳಿ ದ್ವಂಸ, ಭಯೋತ್ಪಾದಕರ ಮಾರಣಹೋಮ- ಟಿ ಎಂ ಶಾಹಿದ್ ತೆಕ್ಕಿಲ್ ಶ್ಲಾಘನೆ…

ಸುಳ್ಯ: ಪಹಲ್ಗಮ್ ದಾಳಿಗೆ ಪ್ರತೀಕಾರವಾಗಿ ಭಾರತದ “ಆಪರೇಷನ್ ಸಿಂದೂರ” ಮುಖಾಂತರ ಪಾಕಿಸ್ತಾನದ ಭಯೋತ್ಪಾದಕರ ಮಾರಣ ಹೋಮ ಮತ್ತು ಭಯೋತ್ಪಾದಕರ ನೆಲೆಯನ್ನು ದ್ವಂಸ ಗೊಳಿಸಿದ ಭಾರತ ಸೈನ್ಯಕ್ಕೆ ಕಾರ್ಯಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಸ ಹಾಗೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೈನ್ಯಕ್ಕೆ ಸಂಪೂರ್ಣ ಬೆಂಬಲ, ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಹಕರಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗು ಕೇಂದ್ರ ಸರಕಾರದ ಸಂಬಂಧಪಟ್ಟ ಎಲ್ಲರನ್ನು ಅಭಿನಂದಿಸುತ್ತೇನೆ. ಸೇನೆಯ ಈ ಕಾರ್ಯ ಅತೀ ಅಗತ್ಯದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅಭಿಪ್ರಾಯ ತಿಳಿಸಿದ್ದಾರೆ.
ದೇಶದ ಸಾರ್ವಭೌಮತೆ, ಅಖಂಡತೆಯನ್ನು ಕಾಪಾಡಲು ದೇಶದ ಪ್ರತಿಯೊಬ್ಬ ನಾಗರಿಕರು ತಯಾರಾಗಿದ್ದು, ಯುದ್ಧ ಸಂಭವಿಸಿದಲ್ಲಿ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಿ ಭಾರತದ ತೆಕ್ಕೆಗೆ ಅಗತ್ಯವಿರುವ ಸ್ಥಳವನ್ನು ವಶಪಡಿಸುವ ಕೆಲಸ ಆಗಬೇಕು. ಇನ್ನು ಮುಂದೆ ಪಾಕಿಸ್ತಾನ ಭಾರತದ ತಂಟೆಗೆ ಬಾರದ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಶತ್ರು ದೇಶಕ್ಕೆ ತಕ್ಕ ಪಾಠ ಮತ್ತು ಭಯೋತ್ಪಾದಕರಿಗೆ ಅಂತಿಮ ಮೊಳೆ ಹೊಡೆಯುವಂತಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಆಶಿಸಿದರು.

Sponsors

Related Articles

Back to top button