ರೂಪ. ವಿ. ಭಟ್. ಇವರ ಶ್ರದ್ಧಾಂಜಲಿ ಸಭೆ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್ ಇವರ ಧರ್ಮಪತ್ನಿ ರೂಪ. ವಿ. ಭಟ್. ಇವರ ಶ್ರದ್ಧಾಂಜಲಿ ಸಭೆ ಬುಧವಾರದಂದು ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಮೃತರು ದೇವಸ್ಥಾನಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯಕೆ ರಾಧಾಕೃಷ್ಣ ಆಳ್ವ, ಅಧ್ಯಾಪಕ ರಾಮಕೃಷ್ಣ ಭಟ್. ಜಿ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಕೆ.ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ಗುತ್ತು, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಆಳ್ವ ಮೊದಲಾದವರು ಮೃತರ ಗುಣಗಾನ ಮಾಡಿದರು. ಶಿವರಾಮ ಭಂಡಾರಿ ಜಯಶಂಕರ ಬಾಸ್ರಿತ್ತಾಯ, ಸುರೇಶ್ ಬಂಗೇರ, ದೇವಸ್ಥಾನದ ಅರ್ಚಕ ಗಣಪತಿ ಭಟ್, ಪ್ರವೀಣ್ ಶೆಟ್ಟಿ, ಕೃಷ್ಣ ಭಟ್, ಸೋಮನಾಥ ಬಂಡಾರಿ, ಗಣಪತಿ ಭಟ್, ಅರವಿಂದ ಭಟ್ ಪದ್ಯಾಣ, ಹರೀಶ್ ಬಂಗೇರ, ವಿಶ್ವನಾಥ್ ಆಳ್ವ, ಕೆ. ವಾಸುದೇವ ಭಟ್, ಶುಭಾಷ್, ಸುರೇಶ್ ಭಟ್, ಪ್ರವೀಣ್ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 08 09 at 9.42.24 pm

Related Articles

Back to top button