ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯದ ಎನ್ ಎಸ್ .ಯು.ಐ. ಉಸ್ತುವಾರಿಯಾಗಿ ಸಿ.ವಿ. ಆದಿಲ್ ಅಲಿ ಆಯ್ಕೆ…..

ಸುಳ್ಯ: ದೆಹಲಿ ಯ ಎನ್ ಎಸ್ ಯು.ಐ ಸಂದರ್ಶನದಲ್ಲಿ ದೇಶಾದ್ಯಂತ ಆಯ್ದ 2500 ವಿದ್ಯಾರ್ಥಿ ನಾಯಕರಲ್ಲಿ 200 ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದ್ದು ಅದರಲ್ಲಿ ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯ ಕ್ಕೆ ಎನ್ ಎಸ್ ಯು ಐ ನ ಉಸ್ತುವಾರಿ ನ್ನಾಗಿ ಸಿ.ವಿ ಆದಿಲ್ ಅಲಿ ಇವರನ್ನು ಎನ್ ಎಸ್ ಯು ಐ ರಾಷ್ಟೀಯ ಅಧ್ಯಕ್ಷ ನೀರಾಜ್ ಕುಂದನ್ ಆಯ್ಕೆ ಮಾಡಿರುತ್ತಾರೆ.
ಇವರು ಕಲ್ಲಿಕೋಟೆ ಸಿ.ವಿ.ರಾಫಿ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ , ಅರಂತೋಡಿನ ಟಿ.ಎಮ್ .ಶಹೀದ್ ತೆಕ್ಕಿಲ್ ರವರ ಸಹೋದರಿ ಟಿ.ಎಮ್ ಜಾಹಿರಾಬಿ ತೆಕ್ಕಿಲ್ ಇವರ ಪುತ್ರ. ಅರಂತೋಡಿನಲ್ಲಿ ಹುಟ್ಟಿ ಬೆಳೆದ ಇವರು ಕ್ಯಾಲಿಕಟ್ ಲಾ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿ ಆಗಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವಾಗಲೇ ಆನೇಕ ಜನಪರ ಹೋರಾಟ ಮಾಡಿದ್ದು ಗ್ರಾಹಕರ ವ್ಯಾಜ್ಯ ಪರಿಹಾರಕ್ಕಾಗಿ ನ್ಯಾಯಾಲಯ ದಲ್ಲಿ ವಾದವನ್ನು ಮಂಡಿಸಿ ವಿಜಯವಾಗಿ ಕೇರಳ ರಾಜ್ಯಾದ್ಯಂತ ಹೆಸರು ವಾಸಿಯಾಗಿರುತ್ತಾರೆ.ಆಲ್ಲದೇ ಅಲಿಯಾ ಹಯಾರ್ ಸೆಕೆಂಡರಿ ಸ್ಕೂಲ್ ಕಾಸರಗೋಡಿನ ವಿದ್ಯಾರ್ಥಿ ನಾಯಕ ನಾಗಿ, ನೆಹರು ಯುವ ಕೇಂದ್ರ ಕ್ಯಾಲಿಕಟ್ ಸದಸ್ಯನಾಗಿ, ಕೇರಳ ರಾಜ್ಯ ದ ಯುಾತ್ ಕಮಿಷನ್ ಕ್ವಾಡಿನಟರಿರಾಗಿ, ಕ್ಯಾಲಿಕಟ್ ಜಿಲ್ಲಾ ಕೆ.ಎಸ್ ಯು ನ ಕಾರ್ಯದರ್ಶಿ ಯಾಗಿ ಮತ್ತು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿರುತ್ತಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪರವಾಗಿ ಕೆಲಸವನ್ನು ನಿರ್ವಹಿಸಿರುತ್ತಾರೆ .