ಆರಾದನಾ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸನ್ಮಾನ…

ಬಂಟ್ವಾಳ : ಆರಾದನಾ ಫ್ರೆಂಡ್ಸ್ ಸರ್ಕಲ್ ಇದರ 34ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸ್ಪರ್ಶಾಕಲಾ ಮಂದಿರ ಬಿ.ಸಿ.ರೋಡ್ ನಲ್ಲಿ ಹಿರಿಯ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರಿಗೆ ನಗದು ಪುರಸ್ಕಾರದೊಂದಿಗೆ ಆರಾದನಾ ಪ್ರಶಸ್ತಿ-2022 ಮತ್ತು ಡೀಕಯ್ಯ ನೇಪಥ್ಯ ಕಲಾವಿದ ಹನುಮಗಿರಿ ಹಾಗೂ ಕಳೆದ 20-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 580 ಅಂಕ ಗಳಿಸಿದ ಮನೀಷ್ ಮಯ್ಯರಬೈಲು ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಹರಿಪ್ರಸಾದ್, ಉದ್ಯಮಿ ಅಶೋಕ್ ಕುಮಾರ್ ನ್ಯಾಯವಾದಿ ನಾರಾಯಣ ಸೋಮಯಾಜಿ, ಗಣಪತಿ ಸೋಮಯಾಜಿ, ನಿವೃತ್ತ ಶಿಕ್ಷಕರಾದ ಮೀನಾಕ್ಷಿ, ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು.

Related Articles

Back to top button