ಸುರತ್ಕಲ್ ಸಮೀಪ ಲಾರಿಗೆ ಸ್ಕಾರ್ಪಿಯೋ ಡಿಕ್ಕಿ – ಒಂದು ಸಾವು……

ಸುರತ್ಕಲ್: ಮುಕ್ಕ ಸಮೀಪದ ಚೇಳ್ಯಾರ್ ಕ್ರಾಸ್ ನಲ್ಲಿ ಸ್ಕಾರ್ಪಿಯೋ ಕಾರೊಂದು ರಸ್ತೆ ವಿಭಜಕವನ್ನು ದಾಟಿಕೊಂಡು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲೇ ಮೃತಪಟ್ಟು, ಉಳಿದ ಮಂದಿ ಗಾಯಗೊಂಡ ಘಟನೆ ಸೆ. 7 ರಂದು ನಡೆದಿದೆ.
MIT ಮಣಿಪಾಲದ ಇಂಟೀರಿಯರ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿನಿ ಗ್ಲೋರಿಯಾ (24) ಮೃತಪಟ್ಟವರು. ಸ್ಕಾರ್ಪಿಯೋ ಚಾಲಕ ಅವನತ್ ಮತ್ತು ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಅಪರ್ಣಾ, ಅಂಕಿತಾ,ರೇಖಾ, ಅನಿತಾ, ಮೇರಿಟಾ, ಗಾಯತ್ರಿ, ಸುಚಲಿತಾ ಗಾಯಗೊಂಡವರು. ಎಂಟು ವಿದ್ಯಾರ್ಥಿಗಳು ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಿದ್ದರು. ಈ ಸಂದರ್ಭ ಮುಕ್ಕ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ, ಮಂಗಳೂರಿಗೆ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೋ ಸಂಪೂರ್ಣ ನುಜ್ಜುಗುಜ್ಜಾಗಿದೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Sponsors

Related Articles

Leave a Reply

Your email address will not be published. Required fields are marked *

Back to top button