ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ – ತಂತ್ರಿಗಳಿಗೆ ಆಹ್ವಾನ…

ಬಂಟ್ವಾಳ: ಶ್ರೀ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ ನಿರ್ಮಾಣಗೊಂಡಿದ್ದು, ಪುನಃಪ್ರತಿಷ್ಠಾಪನೆ ಅಷ್ಟಬಂಧ ನವೀಕರಣ ಬ್ರಹ್ಮಕಲಶೋತ್ಸವ ಫೆ. 9 ರಿಂದ 14 ತನಕ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಆಗಮೋಕ್ತವಾಗಿ ಜರುಗಲಿದ್ದು ಆ ಪ್ರಯುಕ್ತ ನೀಲೇಶ್ವರ ತಂತ್ರಿಗಳನ್ನು ಆಮಂತ್ರಣ ಪತ್ರ ನೀಡಿ ಆಹ್ವಾನಿಸಲಾಯಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ್ಎಂ ಭಂಡಾರಿ ಪುಣ್ಕೆಮಜಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ಆಳ್ವ, ಅರ್ಚಕ ಗಣಪತಿ ಭಟ್, ಉಪಾಧ್ಯಕ್ಷ ಅಶೋಕ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button