ಸುದ್ದಿ

ಕಳಂಜ – ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತರಾದ ಮಹಮ್ಮದ್ ಮಸೂದ್ ಅವರಿಗೆ ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ…

ಸರಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಲು ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹ...

ಸುಳ್ಯ: ತಾಲೂಕಿನ ಕಳಂಜದಲ್ಲಿ ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಮಸೂದ್ ಎಂಬ ಯುವಕ ಇಂದು ಮೃತರಾಗಿದ್ದು,ಘಟನೆಯ ಬಗ್ಗೆ ಟಿ ಎಂ ಶಾಹೀದ್ ತೆಕ್ಕಿಲ್ ತೀವ್ರ ಸಂತಾಪ ಹಾಗೂ ಖಂಡನೆ ವ್ಯಕ್ತಪಡಿಸಿದ್ದಾರೆ.
ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಆದಷ್ಟು ಬೇಗ ಇಂದರ ಹಿಂದಿರುವ ಸೂತ್ರದಾರಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿಜವಾದ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ ಮೃತ ಮಸೂದ್ ರವರ ಬಡ ಕುಟುಂಬಕ್ಕೆ ಇಪ್ಪತೈದು ಲಕ್ಷ ಮೊತ್ತದ ಪರಿಹಾರ ನೀಡಲು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ,ಜಿಲ್ಲೆಯಲ್ಲಿ ಹಾಗೂ ಸುಳ್ಯ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಕೊಲೆ ದರೋಡೆಗಳು ನಡೆಯುತ್ತಿದೆ. ಸರಕಾರ ಗುಪ್ತಚರ ಇಲಾಖೆ ಹಾಗೂ ಪೋಲೀಸ್ ಇಲಾಖೆಗೆ ಸ್ವತಂತ್ರ ಅಧಿಕಾರ ನೀಡಿ ಜನರ ರಕ್ಷಣೆಯನ್ನು ಕಾಪಾಡಲು ಶಾಹೀದ್ ರವರು ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯವನ್ನು ಯಾರು ಕೂಡ ಮಾಡದೇ ಪರಸ್ಪರ ಸಮುದಾಯದಲ್ಲಿ ಐಕ್ಯತೆ, ಸಹೋದರತೆ ಕಾಪಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಟಿ ಎಂ ಶಾಹೀದ್ ತೆಕ್ಕಿಲ್

 

Advertisement

Related Articles

Back to top button