ಸೂರಲ್ಪಾಡಿ ನೌಷಾದ್ ಹಾಜಿ ನಿಧನಕ್ಕೆ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…

ಸುಳ್ಯ: ಹಲವಾರು ಸಂಘ ಸಂಸ್ಥೆಗಳ ಮೂಲಕ ಜನ ಸೇವೆ ಮಾಡುತ್ತಾ ಜನಾನುರಾಗಿಯಾಗಿ ಸಮುದಾಯದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿ ಇತ್ತೀಚೆಗೆ ಸಮಸ್ತ ಜಿಲ್ಲಾ ಮದ್ರಸ ಮೇನೇಜ್ಮೆಂಟ್ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೌಷಾದ್ ಹಾಜಿಯವರು ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಸಮುದಾಯದ ಹಾಗೂ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಹಿತೈಷಿ ಹಾಗೂ ಆತ್ಮೀಯ ಸ್ನೇಹಿತರಾದ ನೌಷಾದ್ ರವರ ಅಕಾಲಿಕ ನಿಧನಕ್ಕೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ತೀವ್ರ ಆಘಾತ-ಸಂತಾಪ ವ್ಯಕ್ತಪಡಿಸಿದ್ದಾರೆ.
ಸಣ್ಣ ವಯಸ್ಸಿನಲ್ಲೇ ಅದೆಷ್ಟೊ ಒಳ್ಳೆಯ ಕಾರ್ಯಗಳನ್ನು ಮಾಡಿ ಸಾರ್ಥಕ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಬದುಕಿ ಬಾಳಿದ ನೌಷಾದ್ ಹಾಜಿಯವರ ನಿಧನ ಜಿಲ್ಲೆಗೆ ಸಮುದಾಯಕ್ಕೆ ತೀರಾ ನಷ್ಟವಾಗಿದೆ ಎಂದು ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಟಿ ಎಂ ಶಾಹಿದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Back to top button