ಜಿಲ್ಲಾ ಮಹಿಳಾ ಒಕ್ಕೂಟ- ಪದಗ್ರಹಣ ಸಮಾರಂಭ…

ಪುತ್ತೂರು: ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ)ದ.ಕ.ಜಿಲ್ಲೆ ಮಂಗಳೂರು, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ಜಿಲ್ಲಾ ಮಹಿಳಾ ಒಕ್ಕೂಟದ ಪದಗ್ರಹಣ ಸಮಾರಂಭ ಹಾಗೂ ಮಹಿಳಾ ಸಬಲೀಕರಣದ ಮಾಹಿತಿ ಹಾಗೂ ಓಣಂ ಆಚರಣೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಲಯನ್.ಟಿ.ಪ್ರೇಮಲತಾರಾವ್ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀಮತಿ ಶಾಂತಿ ಹೆಗಡೆ ಅಧ್ಯಕ್ಷರು ಮಹಿಳಾಮಂಡಲಗಳ ಒಕ್ಕೂಟ (ರಿ) ಪುತ್ತೂರು ಘಟಕ ಸಭಾಧ್ಯಕ್ಷತೆ ವಹಿಸಿದ್ದರು.
ಶಾಂತಾ ಪುತ್ತೂರು ಸಾಹಿತಿ, ಶಿಕ್ಷಕಿ ಸರಕಾರಿ ಪ್ರೌಢಶಾಲೆ ಕಬಕ ಮುಖ್ಯ ಅತಿಥಿಯಾಗಿ, ಸಂಪನ್ಮೂಲ ವ್ಯಕ್ತಿ ಯಾಗಿ ಮಹಿಳಾಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ನಂತರ ಸಾಧಕ ಮಹಿಳೆಯರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ಚಂಚಲ ತೇಜೋಮಯ ನಿಕಟಪೂರ್ವ ಅಧ್ಯಕ್ಷರು, ಶ್ರೀಮತಿ ಉಷಾನಾಯಕ್ ನಿಯೋಜಿತ ಅಧ್ಯಕ್ಷರು, ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಮಹಿಳಾ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.
ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು,ಬೇರೆ ಬೇರೆ ತಾಲೂಕುಗಳ ಮಹಿಳಾ ಮಂಡಲಗಳ ಒಕ್ಕೂಟ ದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.