ಆದಿತ್ಯವಾರ – ದ.ಕ. 5 , ಉಡುಪಿ 21 ಹಾಗೂ ರಾಜ್ಯದಲ್ಲಿ 176 ಕೊರೊನ ಪಾಸಿಟಿವ್ ಪ್ರಕರಣ ಪತ್ತೆ …

ಮಂಗಳೂರು: ಇಂದು (ಆದಿತ್ಯವಾರ) ದ.ಕ ಜಿಲ್ಲೆಯಲ್ಲಿ 5 , ಉಡುಪಿ ಜಿಲ್ಲೆಯಲ್ಲಿ 21 ಹಾಗೂ ರಾಜ್ಯದಲ್ಲಿ 176 ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದ.ಕ. ಜಿಲ್ಲೆಯ 5 ಪ್ರಕರಣಗಳ ಪೈಕಿ ಮೂವರು ದುಬೈನಿಂದ ಮರಳಿದವರಾಗಿದ್ದು, ಇಬ್ಬರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಇಂದು ಜಿಲ್ಲೆಯಲ್ಲಿ ಹನ್ನೊಂದು ಮಂದಿ ಗುಣಮುಖರಾಗಿದ್ದಾರೆ.
ಉಡುಪಿ ಜಿಲ್ಲೆಯ 21 ಪ್ರಕರಣಗಳ ಪೈಕಿ ಹದಿನೆಂಟು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ ಹಾಗೂ ತಮಿಳುನಾಡಿನಿಂದ ಮರಳಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇನೋರ್ವ 53 ವರ್ಷದ ವ್ಯಕ್ತಿಯಲ್ಲಿ ಕೊರೊನ ಪತ್ತೆಯಾಗಿದ್ದು, ಸೋಂಕಿನ ಮೂಲ ತಿಳಿದುಬಂದಿಲ್ಲ.
ಇನ್ನು ಇಂದು ರಾಜ್ಯದಲ್ಲಿ 176 ಜನರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 42 , ಯಾದಗಿರಿ ಜಿಲ್ಲೆಯಲ್ಲಿ 22 ,ಬೀದರ್ ನಲ್ಲಿ 20 ,ಕಲಬುರಗಿಯಲ್ಲಿ 13, ಧಾರವಾಡದಲ್ಲಿ 10, ಬಳ್ಳಾರಿಯಲ್ಲಿ 8 , ಕೋಲಾರದಲ್ಲಿ 7 , ಉತ್ತರ ಕನ್ನಡ 6 , ಮಂಡ್ಯ ಜಿಲ್ಲೆಯಲ್ಲಿ 5 , ಬಾಗಲಕೋಟೆ 4 , ರಾಮನಗರದಲ್ಲಿ 3 , ರಾಯಚೂರು ಮತ್ತು ಶಿವಮೊಗ್ಗದಲ್ಲಿ 2, ಬೆಳಗಾವಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಹಾವೇರಿಯಲ್ಲಿ ತಲಾ ಒಂದು ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ.