ಸುಳ್ಯದಲ್ಲಿ ಕೊರೋನಾ ವಾರಿಯರ್ ಗೆ ಸೋಂಕು ದೃಢ, ಸರಕಾರಿ ಆಸ್ಪತ್ರೆ ಐ.ಸಿ.ಯು ಸೀಲ್ ಡೌನ್…
ಸುಳ್ಯ: ಸುಳ್ಯದಲ್ಲಿ ಇಂದು(ಮಂಗಳವಾರ) ಮತ್ತೆ ಒಂದು ಕೊರೋನಾ ಸೋಂಕು ದೃಢವಾಗಿದೆ. ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಬದ ಕೊರೋನಾ ವಾರಿಯರ್ ನರ್ಸ್ ಒಬ್ಬರಿಗೆ ಸೋಂಕು ತಗುಲಿದೆ.
ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮದ, ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಓರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಿಂದ ಪ್ರತೀದಿನ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇಂದು ಅವರ ಗಂಟಲ ದ್ರವ ಮಾದರಿ ಪರೀಕ್ಷೆಯು ಪಾಸಿಟಿವ್ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಐ.ಸಿ.ಯು. ಘಟಕವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಐ.ಸಿ.ಯು. ನಲ್ಲಿ ವಾರದ ಹಿಂದೆ ದಾಖಲಾಗಿ ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂಡ ಹಿನ್ನಲೆಯಲ್ಲಿ 13 ಮಂದಿ ನರ್ಸಗಳ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ರಿಪೋರ್ಟ್ ಬಂದಿದ್ದು, 12 ನೆಗೆಟಿವ್ ಹಾಗೂ ಒಂದು ಪಾಸಿಟಿವ್ ಆಗಿದೆ.