ಮಂಚಿ ಕುಕ್ಕಾಜೆಯಲ್ಲಿ ಎಡನೀರು ಶ್ರೀಗಳಿಗೆ ಶೃದ್ಧಾಂಜಲಿ…
ಬಂಟ್ವಾಳ: ಕೃಷೈಕ್ಯರಾದ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತಿ ಶ್ರೀಪಾದಂಗಳವರ ದಿವ್ಯಾತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ, ಮಂಚಿ ಕುಕ್ಕಾಜೆ ಲಕ್ಷ್ಮೀನರಸಿಂಹ ಸಹಕಾರ ಸಂಘದ ಕಚೇರಿಯಲ್ಲಿ ಶೃದ್ದಾಂಜಲಿ ಅರ್ಪಿಸಲಾಯಿತು.
ಸಂಘದ ಅಧ್ಯಕ್ಷ ಕೈಯೂರು ನಾರಾಯಣ ಭಟ್ಟರು ಪೂಜ್ಯ ಸ್ವಾಮೀಜಿಯವರು ಲಕ್ಷ್ಮೀ ನರಸಿಂಹ ಸಹಕಾರ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದ್ದರು. ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ. ಮಂಚಿಯಲ್ಲಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಯಕ್ಷಗಾನ ಸಪ್ತಾಹಗಳನ್ನು ನಡೆಸುವುದಕ್ಕೆ ಅನುವು ಮಾಡಿ ಕೊಟ್ಟಿದ್ದರು. ಸ್ವಾಮೀಜಿಯವರು ಸಾಮಾಜಿಕ- ಧಾರ್ಮಿಕ- ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಕನ್ನಡ ಭಾಷೆ, ಸಂಸ್ಕೃತಿಗೆ ಹಾಗೂ ಕಾಸರಗೋಡಿಗೆ ಸಂಪರ್ಕ ಸೇತು ಆಗಿದ್ದರು ಎಂದು ಸ್ವಾಮೀಜಿಯವರ ಸಾಧನೆಗಳನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಗೌರವಾರ್ಪಣೆ ಸಲ್ಲಿಸಿದರು.