ಸುದ್ದಿ

ಬಂಟ್ವಾಳ – ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಇದರ ವಾರ್ಷಿಕೋತ್ಸವ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಬಂಟ್ವಾಳ ಇದರ ವಾರ್ಷಿಕೋತ್ಸವ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸೆ.8 ರಂದು ನಡೆಯಿತು.
ಬಂಟ್ವಾಳ ತಾಲೂಕು ಅಧ್ಯಕ್ಷ ಎಂ ಶಿವರಾಮಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪಿ ಕೃಷ್ಣರಾಜ ಭಟ್ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ ಕೆ ಎಲ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವೆಂಕಟರಮಣ ಮುಚ್ಚಿನ್ನಾಯ, ದೇವಳದ ಅರ್ಚಕ ನಟರಾಜ ಉಪಾಧ್ಯಾಯ , ಅರ್ಚಕ ಬಾಲಕೃಷ್ಣ ಆಚಾರ್ಯ, ತಾಲೂಕು ಸಂಚಾಲಕ ಪೈಕ ವೆಂಕಟ್ರಮಣ ಭಟ್, ತಾಲೂಕು ಸಂಯೋಜಕ ಎಂ ಸುಬ್ರಹ್ಮಣ್ಯ ಭಟ್, ತಾಲೂಕು ಸಂಘಟಕ ಬಾಲಕೃಷ್ಣ ಕಾರಂತ,. ಕಾರ್ಯದರ್ಶಿ ಶ್ರೀನಿಧಿ ಮುಚ್ಚಿನ್ನಾಯ ಮೊದಲಾದವರು ಉಪಸ್ಥಿತರಿದ್ದರು ಕಾರಿಂಜೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ರುದ್ರ ಪಾರಾಯಣ, ದೇವತಾ ಪ್ರಾರ್ಥನೆ ನಡೆಸಲಾಯಿತು.

Advertisement

Related Articles

Back to top button