ರೋಟರಿ ಸುಳ್ಯ- ಆರೋಗ್ಯ ಕಿಟ್ ವಿತರಣೆ….

ಸುಳ್ಯ:ರೋಟರಿ ಕ್ಲಬ್ ವತಿಯಿಂದ ಸರಕಾರಿ ತಾಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಠಾಣೆ ಸುಳ್ಯ, ಗೃಹರಕ್ಷಕ ದಳ ಹಾಗೂ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಿಬ್ಬಂದಿಗಳಿಗೆ ಸಹಾಯವಾಗುವಂತಹ ೫ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್ ಕಿಟ್, 600 ಟ್ರಿಪಲ್ ಲೇಯರ್ ಮಾಸ್ಕ್, 200 ಗ್ಲೌಸ್‌ಗಳನ್ನು ತಾಲೂಕು ವೈದ್ಯಾಧಿಕಾರಿ ಡಾ. ಭಾನುಮತಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸುಬ್ರಮಣ್ಯ, ಸುಳ್ಯ ಠಾಣಾಧಿಕಾರಿ ಶ್ರೀ ಹರೀಶ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಶ್ರೀ ಮಂಜುನಾಥ್ ಇವರುಗಳಿಗೆ ರೋಟರಿ ಅಧ್ಯಕ್ಷರಾದ ಡಾ. ಪುರುಷೋತ್ತಮ ಕಟ್ಟೆಮನೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ರೊ.ಸನತ್ ಕುಮಾರ್, ಖಜಾಂಚಿ ರೊ.ಸತೀಶ್ ಕೆ. ಜಿ., ರೊ.ಗಣೇಶ್ ಆಳ್ವ ಉಪಸ್ಥಿತರಿದ್ದರು.