ಕಣ್ಣಿನ ಬೆಳಕು…

ಕಣ್ಣಿನ ಬೆಳಕು…
ಕಣ್ಣು ತೆರೆದು ನೋಡಿದೊಡನೆ
ನಿನ್ನ ಕಾಣಲು
ಕಣ್ಣ ಬೆಳಕಿನಲ್ಲಿ ನಿನ್ನ ಮೊಗವ ಬೆಳಗುವೆ
ಕಣ್ಣ ರೆಪ್ಪೆ ಮಿಟುಕಿಸುತ್ತ
ಶುಭವ ಹೇಳಲು
ಮೊಗದ ತುಂಬ ನಗುವ ಸುಮವು ಚಿಮ್ಮಿಅರಳಿದೆ
ನೋಟದೊಡನೆ ನೋಟ ಬೆರೆತು
ಏಕವಾಗಲು
ಭಾವವೆಲ್ಲ ಕರಗಿ ಮನವು ಹಗುರವಾಯಿತು
ಕಣ್ಣ ಜ್ಯೋತಿ ಜಗವ ಬೆಳಗಿ
ತಿಮಿರವಳಿಯಲು
ಸಕಲ ಜೀವಜಾಲವೆಲ್ಲ ಸುಖದಿ ನಲಿಯಿತು
ರಚನೆ: ಡಾ. ವೀಣಾ ಎನ್ ಸುಳ್ಯ
Sponsors