ಉಚಿತ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಪರೀಕ್ಷೆ…

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ,ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಮತ್ತು ಶ್ರೀ ದುಗಾ೯ ಕ್ಲಿನಿಕ್, ಗ್ರಾಮೀಣ ಆರೋಗ್ಯ ಕೇಂದ್ರ ಗಡಿಯಾರ ಪೆರಾಜೆ ಜಂಟಿ ಅಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಪರೀಕ್ಷೆ ಕಾಯ೯ಕ್ರಮ ಶ್ರೀ ದುಗಾ೯ ಕ್ಲಿನಿಕ್ ಆರೋಗ್ಯ ಕೇಂದ್ರ ಗಡಿಯಾರ ಪೆರಾಜೆಯಲ್ಲಿ ನಡೆಯಿತು.
ಸಭಾ ಕಾಯ೯ಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪಾಂಡೀಬೆಟ್ಟುರವರು ಶಿಬಿರವನ್ನು ಉಧ್ಧಾಟಿಸಿದರು, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿಯ ಮುಖ್ಯ ವೈದ್ಯಾಧಿಕಾರಿ ಡಾ.ಶಶಿಕಲಾ ಅವರು ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಪರೀಕ್ಷೆ ಕುರಿತು ಮಾಹಿತಿ ನೀಡಿದರು.
ಪೆರಾಜೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಭುಶಮ೯, ಮಾಣಿ ಗ್ರಾಮಪಂಚಾಯತ್ ಗ್ರಾಮಕರಣೀಕರಾದ ಸುರಕ್ಷಾ, ಕೆ ಎಂ ಸಿ ಆಸ್ಪತ್ರೆ ಮಂಗಳೂರಿನ ಸಾವ೯ಜನಿಕ ಸಂಪಕ೯ ಅಧಿಕಾರಿ ಮನಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಲಯನ್ ಪದಾಧಿಕಾರಿಗಳಾದ ಲ. ಗಂಗಾಧರ ರೈ,ಮೋಹನ ದಾಸ ಶೆಟ್ಟಿ, ನವೀತ್ ಶೆಟ್ಟಿ, ಗಣೇಶ್ ಆರ್ ಶೆಟ್ಟಿ, ರತ್ನಾಕರ ರೈ, ಕುಶಲ ಯಂ ಪೆರಾಜೆ,ವೈದ್ಯಾಧಿಕಾರಿಗಳು,ಸಿಬ್ಬಂಧಿ ವಗ೯,ಅಶಾ ಕಾಯ೯ಕತ೯ರು ಶಿಬಿರಾಥಿ೯ಗಳು ಭಾಗವಹಿಸಿದ್ದರು. ಶಿಬಿರದ ಸಂಯೋಜಕರಾದ ಲ.ಡಾ.ಮನೋಹರ ರೈ ಯವರು ಸ್ವಾಗತ ನೀಡಿದರು, ಲ. ಕಾಯ೯ದಶಿ೯ ಧನ್ಯವಾದ ನೀಡುವುದರೊಂದಿಗೆ ಕಾಯ೯ಕ್ರಮ ನಿರೂಪಿಸಿದರು.