ನೀಲಿ ಭೀಮ್ ರಾಖಿ ಮೂಲಕ ರಕ್ಷಾಬಂಧನ ಕಾರ್ಯಕ್ರಮ…

ಸುಳ್ಯ: ಪ್ರಕೃತಿ ಯುವ ಸೇವಾ ಸಂಘ(ರಿ) ಬೂಡು ಸುಳ್ಯ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು, ಸುಳ್ಯ ಇದರ ವತಿಯಿಂದ ಪ್ರಥಮ ಬಾರಿಗೆ ನೀಲಿ ಭೀಮ್ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು. ಸಂಘದ ಅಧ್ಯಕ್ಷರಾದ ಉದಯ್ ಜಿ ಕೆ,ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಿ ನಾಗೇಶ್ ಹಾಗೂ ಅತಿಥಿಯಾಗಿ ಬೂಡು ಅಂಗನವಾಡಿ ಕಾರ್ಯಕರ್ತೆ ಕುಮಾರಿ ಕವಿತಾ ಮತ್ತು ದಲಿತ ಸೇವಾ ಸಮಿತಿ ನಗರ ಸಂಚಾಲಕರಾದ ಮಧುಸೂದನ್ ಬೂಡು ಅಲ್ಲದೆ ಸಂಘದ ಮಾಜಿ ಕಾರ್ಯದರ್ಶಿ ರಮೇಶ್ ಬೂಡು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಪ್ರಕಾಶ್ ಬೂಡು ಹಾಗೂ ಕೋಶಾಧಿಕಾರಿ ಮಹೇಶ್ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಎಲ್ಲ ಸದಸ್ಯರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.